ಭೂಮಿಯ ಸಂಭಂದಗಳನ್ನು ಕಳಚಿಕೊಂಡು ಭೂಮಿಯಿಂದ
ಕೋಟಿ ಮೈಲುದೂರ ಪ್ರಯಾಣ ಮಾಡಬೇಕೆ, ಈ
ಪ್ರ'ಯಾನ'ಕ್ಕೆ ತಗಲುವ ವೆಚ್ಚ ಕೇವಲ ರೂ190!
ತಮ್ಮ 83 ನೇ ವಯಸ್ಸಿನಲ್ಲೂ ಈ ತರಹದ ಕಲ್ಪನೆ, ವಿವರಣೆ, ನಿರೂಪಣೆ ಹಾಗು ಓದುಗನನ್ನು ಆಯಸ್ಕಾಂತದಂತೆ
ಹಿಡಿದಿಡುವ ಜಾಣ್ಮೆಗೆ ನನ್ನ ಸಲಾಂ!
ಆಂಗ್ಲ ಲೇಖಕ 'ಡ್ಯಾನ್ ಬ್ರೌನ್' ನ ಮೆಚ್ಚುಗನಾದ ನಾನು ಅವರ ವೈಜ್ಞಾನಿಕ ತಳಹದಿ
ಕಾದಂಬರಿ 'ಡಿಸೆಪ್ಶನ್ ಪಾಯಂಟ್' ಓದಿದಾಗ ತುಂಬಾ ಪುಳಕಿತನಾಗಿದ್ದೆ. ಒಬ್ಬ
ವಿಜ್ಞಾನಿ ಅಲ್ಲದವ ಖಗೋಳ, ಖಭೌತ
ಶಾಸ್ತ್ರದ ಬಗ್ಗೆ ಬರೆಯುವುದೆಂತು ಎಂದು ಆಶ್ಚರ್ಯಪಟ್ಟಿದ್ದೆ ಇಂದು ಡಾ ಎಸ್. ಎಲ್. ಭೈರಪ್ಪ ನವರ 'ಯಾನ' ಓದಿ ಮಾನವನ ಆಸೆಗೆ ಎಲ್ಲೆ ಇದ್ದಿದ್ದರೆ ಮಾನವ
ಗುರುತ್ವಾಕರ್ಷಣೆ ನೆಪ ಒಡ್ಡಿ ಇಲ್ಲೇ ಅಡ್ಡಾಡುತ್ತಿದ್ದ ಹಾಗು ಒದ್ದಾಡುತ್ತಿದ್ದ ಎಂಬ ಸತ್ಯ
ಗಟ್ಟಿಗೊಳ್ಳುತ್ತದೆ.
ಮಾನವ ಯಂತ್ರ ಆವಿಷ್ಕಾರ ಮಾಡ ಬಹುದು ಅದರಿಂದ
ವಿಕ್ರಮ ಸಾಧಿಸಬಹುದು ಆದರೆ ತಾನು ಹುಟ್ಟಿಬಂದ ನೆಲದ, ಧರ್ಮ-ಕರ್ಮದ ಸಂಬಂಧ ಭೂಮಿಯಿಂದ ಕೋಟಿ ಮೈಲು
ದೂರವಾದರೂ ಕಳಚಿಕೊಳ್ಳುವುದು ಎಷ್ಟು ಕಷ್ಟವೆಂಬುದನ್ನು ಸೊಗಸಾಗಿ ವರ್ಣಿಸಿದ್ದಾರೆ.
ಕೃತಕ ಎಂಬುವ ಪದ ವಸ್ತುವಿನಿಂದ ಮನುಷ್ಯನ
ವಾಸ್ತವತೆಗೆ ( ಕೃತಕಗರ್ಭದಾರಣೆ ಹಾಗು ಬಾಡಿಗೆ ತಾಯ್ತನ )ಹರಡಿರುವುದು ವಿಸ್ಮಯ ಹಾಗು ಮನುಷ್ಯ
ತನ್ನ ಸಹಜತೆಯಿಂದ ದೂರವಾಗೋ ಲಕ್ಷಣಗಳೇ ಜಾಸ್ತಿ ಕಾಣಿಸುತ್ತಿದೆ. ಈ ವಿಷಯವನ್ನು ಬಹಳ ಅರ್ಥವಾಗುವ
ಹಾಗೆ ಹೇಳಿರುವರು.
ಇಂದಿನ ಪೀಳಿಗೆ ತಮಗೆ ಕೆಲಸ ಸಿಗುವ ಹಾಗು
ಸಿಕ್ಕ ಕೆಲಸ ಉಳಿಸುವ ವಿಷಯವನ್ನು ಮಾತ್ರ
ಅಭ್ಯಯಿಸುತ್ತಾರೆ ಹಾಗು ತನ್ನಗೆ ಸಂಭಂದಿಸದ ವಿದ್ಯೆ ಕಲಿಯಲು ಮುಂದುವರಿಯುವುದಿಲ್ಲ ಆದರೆ ಡಾ
ಎಸ್. ಎಲ್. ಭೈರಪ್ಪನವರು ಇಂದಿನ ಪೀಳಿಗೆಯ ತಂತ್ರಜ್ಞಾವನ್ನು ಹಾಗು ಯುವಜನತೆಯ ಜೀವನಕ್ರಮವನ್ನು
ಬಹಳ ಅಭ್ಯಯಿಸಿ ಬರದಿದ್ದಾರೆ.
ಈ ಅಭೂತಪೂರ್ವ'ಯಾನ'ಕ್ಕೆ ನಮ್ಮನು ಕರೆದುಕೊಂಡು ಹೋದ ನಮ್ಮ
ಮೆಚ್ಚಿನ ಸಾಹಿತಿಗೆ ಧನ್ಯವಾದಗಳು ಹಾಗು 'ಯಾನ' ಕನ್ನಡ ಸಾಹಿತ್ಯಲೋಕದಲ್ಲಿ ಹೊಸ ದಾಖಲೆ
ಮಾಡಲೆಂದು ಶುಭಾಶಯ ಕೋರುತ್ತೇನೆ.
© ಮಹೇಶ್ ಕಶ್ಯಪ್
© ಮಹೇಶ್ ಕಶ್ಯಪ್

No comments:
Post a Comment