Friday, August 22, 2014

ಜನಸಂಖ್ಯಾ ಸ್ಫೋಟ



ಹೆಚ್ಚುತ್ತಿರುವ ಜನಸಂಖ್ಯೆ, ಸುಖ ಜೀವಿಗಳದ್ದು ಅಲ್ಪಸಂಖ್ಯೆ
ಹೊಟ್ಟೆಗೆ  ಹಿಟ್ಟಿಲ್ಲ  ಮಕ್ಕಳಿಗೆ ಬರವಿಲ್ಲ
ಸಂತಾನ ದೇವಿಯ ಭಕ್ತರೇಯೆಲ್ಲ.

ಕುಡಿಯಲು ನೀರಿಲ್ಲ, ಇರಲು ನೆಲೆಯಿಲ್ಲ
ದೇಹದಲ್ಲಿ ರಕ್ತವಿಲ್ಲ,  ಜೀವನಕ್ಕೆ ದಾರಿಯಿಲ್ಲ
ಇವರ ಮಿತಿಮೀರಿದ ಸಂತಾನಕ್ಕೆ ಇತಿಯೇ ಇಲ್ಲ.

ಇನ್ನೆಷ್ಟು ದಿನ ತಡೆದಾಳು ಭೂತಾಯಿ
ಈಗಲೇ ಕೊಟ್ಟಿರುವಳು ಕೈ ಸಿಟ್ಟೇರಿ
ಪ್ರವಾಹಗಳು ಉಕ್ಕಿ, ಭೂಕಂಪನಕ್ಕೆ ಸಿಕ್ಕಿ, ಭೂತಾಯಿ ಕ್ರೋಧ ಉಕ್ಕಿ.

ಏಕೆ ಅವಳ ಕೆಣಕಬೇಕು, ಜನಸಂಖ್ಯಾ ಮಿತಿಗೆ ದೀಕ್ಷೆ ತೊಡಬೇಕು
ಹೆಣ್ಣಾದರೇನು ಗಂಡಾದರೇನು, ಮಗುವೊಂದೇ ಸಾಕು
ನೀಡುವ ಮಕ್ಕಳಿಗೆ ವಿದ್ಯೆಯ, ದೇಶ ಕಟ್ಟುವ ಶ್ರದ್ದೆಯ.
                                                
                                                                     

                                                                             © ಮಹೇಶ್ ಕಶ್ಯಪ್


No comments:

Post a Comment